ಈ ಲೇಖನ ಕನ್ನಡ ಚಲನಚಿತ್ರ ಪುರಂದರದಾಸ ಬಗ್ಗೆ. ಹರಿಭಕ್ತ, ದಾಸಸಾಹಿತ್ಯದ ಪುರಂದರದಾಸರ ಬಗ್ಗೆ ಮಾಹಿತಿಗೆ ಈ ಲೇಖನವನ್ನು('ಪುರಂದರದಾಸರು') ಓದಿ. ಪುರಂದರದಾಸ - ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಂಜಪ್ಪ ಚೆಟ್ಟಿಯಾರ್ ನಿರ್ಮಿಸಿದ್ದ, ಬಿ. ಚೌಹಾಣ್ ರವರ ನಿರ್ದೇಶನದ ಈ ಚಿತ್ರದಲ್ಲಿ ಜಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮತ್ತು ಜೆ. ಟಿ. ಬಾಲಕೃಷ್ಣರಾವ್ ರವರು ನಟಿಸಿದ್ದರು. ಚಿತ್ರ ಬೆಳ್ಳಾವೆ ನರಹರಿ ಶಾಸ್ತ್ರಿಯವರ ಸಂಗೀತವನ್ನು ಹೊಂದಿತ್ತು. == ಕಥಾ ಸಾರಾಂಶ == ನವಕೋಟಿ ನಾರಾಯಣನಾಗಿ, ಜಿಪುಣನಾಗಿದ್ದ ಶ್ರೀನಿವಾಸ ನಾಯಕನಿಗೆ ದೈವ ಪ್ರೇರಣೆಯಾಗಿ ಸಕಲವನ್ನು ದಾನ ಮಾಡಿ, ಭಗವನ್ನಾಮ ಸ್ಮರಣೆಯಲ್ಲಿ ತೊಡಗಿ ಪುರಂದರದಾಸ ಎಂದು ಹೆಸರು ಪಡೆಯುವ ಪ್ರಚಲಿತ ಕತೆ ಈ ಚಲನಚಿತ್ರದ ಕಥಾ ಹಂದರ ಒಳಗೊಂಡಿದೆ. == ನಿರ್ಮಾಣ ಮತ್ತು ಬಿಡುಗಡೆ == ದೇವಿ ಫಿಲಂಸ್‌ ಲಾಂಛನದಲ್ಲಿ ತಯಾರಾದ "ಪುರಂದರ ದಾಸ" ಚಿತ್ರ, ೧೬೨ ನಿಮಿಷಗಳಷ್ಟು ಅವಧಿಯದಾಗಿತ್ತು. ೧೪,೨೦೦ ಅಡಿ ಉದ್ದವಿದ್ದ ಈ ಚಲನಚಿತ್ರ ಮೈಸೂರು ಸೆಲೆಕ್ಟ್‌ ಟಾಕೀಸ್‌ ಅವರಿಗಾಗಿ, ೧೩ ಅಕ್ಟೋಬರ್‌, ೧೯೩೭ರಂದು ಸೆನ್ಸಾರ್‌ ಆಯಿತು. == ಹಾಡುಗಳು == ಅತಿ ಮುಡಿಲಲ್ಲ್ಲಿ ಬಿರಿದ ಹೂಗಳು ಶಾಂತಿಯೆ ಜೀವನ ಸುಮ ಮಾಲೆ ಕಾಮನು ಕಾಡುವ